x

Subscribe to our mailing list

* indicates required
Email Format
xMore about yourself *How do you plan to use these resources?


ENGLISH | KANNADA
ನನಗೆ ಇನ್ನಷ್ಟು ಕಥೆ ಕಾರ್ಡುಗಳು ಬೇಕು

ಹನ್ನೊಂದು ವರ್ಷದ ರೇಣುಕ ಜೆಡ್ಡಲಹಳ್ಳಿಯ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ 5 ನೇ ತರಗತಿಯಲ್ಲಿದ್ದಾಳೆ. ಆಕೆಯ ಪ್ರಾಥಮಿಕ ಮೌಲ್ಯಮಾಪನದಲ್ಲಿ ಆಕೆಯು ಪದಗಳ ಮಟ್ಟದಲ್ಲಿದ್ದಳು. ಈ ಕಾರ್ಯಕ್ರಮವು ಮುಗಿದ ಬಳಿಕ ಆಕೆ ಪ್ಯಾರಾಗ್ರಾಫ್ ಹಂತದಲ್ಲಿರುವಳು. ಆಕೆಯ ಮುಖವು ಹೊಳಪಿನಿಂದ ಕೂಡಿದ್ದು ಆಕೆಯ ಕಣ್ಣುಗಳು ಬುದ್ಧಿವಂತಿಕೆಯನ್ನು ಸೂಚಿಸುತ್ತವೆ ಮತ್ತು ಆಕೆಯ ಮಾತುಗಳು ಮೃದುವಾಗಿವೆ. “ ಕಥೆ ಕಾರ್ಡ್ ನನಗಿಷ್ಟವಾಗಿದೆ. ನಾನು ಅವೆಲ್ಲವನ್ನೂ ಇಷ್ಟಪಟ್ಟಿದ್ದೇನೆ. ನನಗೆ ಚಿತ್ರಗಳು ಕೂಡಾ ಇಷ್ಟವಾದವು” ಎಂದು ಆಕೆ ಹೇಳುವಳು. ಆಕೆಯ ತಲೆಯನ್ನು ಅಲ್ಲಾಡಿಸುತ್ತಾ, ಒಪ್ಪಿಗೆ ಸೂಚಿಸುವಂತೆ ಒಂದು ಮಂದಹಾಸ ಬೀರಿ ಆಕೆ ಹೇಳುವಳು “ ನನಗೆ ಓದುವುದು ಇಷ್ಟವಾಗುತ್ತದೆ. ನಾನು ಕಾರ್ಯಕ್ರಮವನ್ನು ಇಷ್ಟಪಟ್ಟಿದ್ದೇನೆ. ಈ ಕಾರ್ಯಕ್ರಮದ ನಂತರ ನನಗೆ ಪಠ್ಯ ಪುಸ್ತಕಗಳು ಸುಲಭವೆಂದು ಕಂಡುಬರುತ್ತಿವೆ”

ಬಾಯಾರಿದ ದನದ ಒಂದು ಕಥೆಯನ್ನು ಹೇಳಲು ರೇಣುಕ ಎದ್ದು ನಿಲ್ಲುವಳು. ಅದು ಆಕೆಯ ಸ್ವಂತ ರಚನೆಯಾಗಿದ್ದು, ಇದು ಕಥೆ ಕಾರ್ಡ್ ನ ಕಥೆಯ ಚಿತ್ರಕಥೆಯಿಂದ ಭಿನ್ನವಾಗಿದೆಯೆಂದು ಆಕೆ ಹೇಳುವಳು. ಆಕೆ ಒಂದು ಧಾರಾಕಾರ ಮಳೆಯನ್ನು ವಿವರಿಸುತ್ತಾ ಮಳೆ ನೀರು ಮಡಕೆಯಲ್ಲಿ ತುಂಬಿತುಳುಕಿ ಮಡಕೆಯು ಒಂದು ಕಡೆಗೆ ವಾಲುತ್ತದೆ ಮತ್ತು ಒಡೆದುಹೋಗುತ್ತದೆ ಮತ್ತು ದನಕ್ಕೆ ತನ್ನ ಬಾಯಾರಿಕೆಯನ್ನು ನೀಗಿಸಲು ಸಾಧ್ಯವಾಗದಕ್ಕೆ ತುಂಬಾ ನಿರಾಶೆಯಾಗುತ್ತದೆ ಇದನ್ನು ಆಕೆ ವಿವರಿಸುತ್ತಾಳೆ. ಕಥೆ ಕಾರ್ಡ್ ನ್ನು ಕೊಟ್ಟಾಗ ಆಕೆ ಅದನ್ನು ಅತ್ಯಂತ ಚೆನ್ನಾಗಿ ಓದುವಳು ಕೂಡಾ. ಒಂದೇ ಒಂದು ತಪ್ಪು ಕೂಡಾ ಆಕೆಯ ಸುಲಲಿತತೆಯನ್ನು ಹಾಳು ಮಾಡುವುದಿಲ್ಲ. ಆಕೆಯ ಪೋಷಕರು ಮತ್ತು ಇಬ್ಬರು ಹಿರಿಯ ಸಹೋದರಿಯರು ಕಟ್ಟಡ ನಿರ್ಮಾಣ ಕೆಲಸಗಾರರಾಗಿದ್ದಾರೆ.

“ ಆದರೆ ನಾನು ವಿದ್ಯಾಭ್ಯಾಸ ಮಾಡಲು ಬಯಸುತ್ತೇನೆ- ಕೆಲಸಕ್ಕೆ ಹೋಗಲು ಅಲ್ಲ. ನಾನು ಒಬ್ಬ ಶಿಕ್ಷಕಿಯಾಗಲು ಬಯಸುತ್ತೇನೆ”. ರೇಣುಕಳು ಸುಮಾರು ನಾಲ್ಕು ಕಿ.ಮೀ. ದೂರದ ಶಾಲೆಗೆ ನಡೆದುಕೊಂಡು ಹೋಗಿ ಬರುವಳು. “ ನನಗೆ ಇನ್ನಷ್ಟು ಕಥೆ ಕಾರ್ಡ್ ಗಳು ಬೇಕು” ಎಂದು ಹೋಗುವಾಗ ಆಕೆ ಹೇಳಿದಳು.
ನಾನು ಕಥೆಗಳನ್ನು ಪ್ರೀತಿಸುತ್ತೇನೆ

ಏಳನೇ ತರಗತಿಯ ಸುನಿತ ಪೂರ್ತಿ ಏಕಾಗ್ರತೆಯಿಂದ ಕೈಗಳನ್ನು ಕಟ್ಟಿಕೊಂಡು ನಿಂತಿದ್ದಾಳೆ ಮತ್ತು ಪೆದ್ದ ಹುಡುಗನ ಕಥೆಯನ್ನು ಹೇಳುತ್ತಿದ್ದಾಳೆ. ಇದು ಗ್ರಂಥಾಲಯ ಕಾರ್ಯಕ್ರಮದ ‘ಬಿ’ ಹಂತದ ಅಕ್ಷರದ ‘ಗ್ರೋ ಬೈ’ ಶ್ರೇಣೀಕರಣದ ವಿಧಾನದ ಕನ್ನಡ ಪುಸ್ತಕವಾಗಿದೆ. ಆಕೆಗೆ ಅದನ್ನು ಉಲ್ಲೇಖಿಸುವ ಅಗತ್ಯವಿಲ್ಲ ಅಥವಾ ತನ್ನ ನೆನಪನ್ನು ಬಗೆಯಬೇಕಾಗಿಲ್ಲ. ಅದು ಆಕೆಯ ಮನಸ್ಸಿನಲ್ಲಿ ಪಡಿಯಚ್ಚಿನಂತಿದೆ ಮತ್ತು ಇವುಗಳು ಗ್ರಂಥಾಲಯದ ಚೆನ್ನಾಗಿ ಅಭ್ಯಾಸ ಮಾಡಿದ ಮತ್ತು ಚೆನ್ನಾಗಿ ಪ್ರೀತಿಸಲ್ಪಟ್ಟ ದೈನಂದಿನ ಕ್ರಿಯೆಗಳಾಗಿವೆ ಮತ್ತು ಆಕೆಯು ಅವುಗಳನ್ನು ಜ್ಞಾಪಕದಲ್ಲಿಟ್ಟಿರುವಳು.

ತನಗೆ ಕಥೆಯು ಕಂಠಪಾಠವಾಗಿದೆಯೇನೋ ಎಂಬಂತೆ ಆಕೆ ಮುಂದುವರೆಯುವಳು. ಕನ್ನಡದ ಸಂಕೀರ್ಣ ಪದ ಸಂರಚನೆಯನ್ನು ಇಂಪಾಗಿ ಹಿಡಿದಿಡುವಾಗಿನ ಆಕೆಯ ಸುಲಲಿತತೆಯು ಅತ್ಯದ್ಭುತವಾಗಿದೆ. ಯಾವುದೇ ಮುಗ್ಗುರಿಸುವಿಕೆಯಿಲ್ಲ, ಯಾವುದೇ ಹಿಂಜರಿಕೆಯಿಲ್ಲ. ವಿದ್ಯಭ್ಯಾಸದಿಂದ ವಿಮುಖನಾದ ಒಬ್ಬ ಹುಡುಗ ಮತ್ತು ಆತನ ತಂದೆ ಹೇಗೆ ಆತನನ್ನು ಕೋಪದಿಂದ ಮತ್ತೆ ಶಾಲೆಗೆ ಕಳುಹಿಸುತ್ತಾನೆ ಮತ್ತು ಅಲ್ಲಿ ತಾನು ಉತ್ತಮವಾಗಿ ಕಲಿಯುತ್ತೇನೆಂಬ ಭರವಸೆಯನ್ನು ಹುಡುಗ ನೀಡುವನು-ಈ ವೃತ್ತಾಂತವು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ.

ಒಮ್ಮೆ ಕಳ್ಳರು ಕೊಳ್ಳೆ ಹೊಡೆಯುವ ಉದ್ದೇಶದಿಂದ ಹಳ್ಳಿಗೆ ಬರುತ್ತಾರೆ. ಆ ಸಂದರ್ಭದಲ್ಲಿ ಆತ ನೀಡಿದ ಭರವಸೆ ಆತನನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಆತ ಕಲಿತ ಪದ್ಯವೊಂದನ್ನು ಆತ ಗುಡುಗಿನಂತೆ ಹಾಡುತ್ತಾನೆ ಮತ್ತು ಕಳ್ಳರನ್ನು ಆತ ಬೆದರಿಸಿ ಓಡಿಸುತ್ತಾನೆ.

ಈ ಕಥೆಯು ಒಬ್ಬ ಹಳ್ಳಿಯ ಸೋಮಾರಿಯು ಹೇಗೆ ತನ್ನ ಘನತೆಯನ್ನು ಸಂಪಾದಿಸುತ್ತಾನೆಂಬುದು ಈ ಕಥೆಯ ಸಾರವೆಂದು ಸುಚಿತ್ರಳು ಹೇಳುವಳು.

“ನಾನು ಅಕ್ಷರವು ಸ್ಥಾಪಿಸಿದ ಗ್ರಂಥಾಲಯಗಳನ್ನು ಪ್ರೀತಿಸುತ್ತೇನೆ ಮತ್ತು ನಾನು ಕಥೆಗಳನ್ನು ಪ್ರೀತಿಸುತ್ತೇನೆ” ಎಂದು ಸುಚಿತ್ರ ಹೇಳುತ್ತಾಳೆ. “ ನಾನು ಯಾವಾಗಲೂ ಪ್ರಾರಂಭದಿಂದಲೇ ತುಂಬಾ ಪುಸ್ತಕಗಳನ್ನು ಅವುಗಳ ಸಂಖ್ಯೆಯನ್ನು ಎಣಿಸಲು ಸಾಧ್ಯವಿಲ್ಲದಷ್ಟು ಓದಿರುತ್ತೇನೆ. ನಾನು ಬೆಳೆದು ದೊಡ್ಡವಳಾದ ಮೇಲೆ ವೈದ್ಯೆಯಾಗಲು ಬಯಸುತ್ತೇನೆ” ಎಂದು ಆಕೆ ಹೇಳುತ್ತಾಳೆ.
ಕವಿತ ಮರಳಿ ಶಾಲೆಯಲ್ಲಿ

ಕವಿತ ಹತ್ತು ವರ್ಷ ಪ್ರಾಯದವಳು. ಆಕೆ ಮುದ್ದು ಮುದ್ದಾಗಿದ್ದು ಕಲಿಕೆಗೆ ತೆರೆದುಕೊಳ್ಳುವಳು ಮತ್ತು ಆಕೆ ಪುಟ್ಟ ವಿಧೇಯ ಹೆಣ್ಣು ಮಗಳಾಗಿರುವಳು. ಆಕೆ ತನ್ನ ಆರನೇ ತರಗತಿಯ ಕಪ್ಪು ಹಲಗೆಯ ಪಕ್ಕ ನಿಂತುಕೊಂಡಿರುತ್ತಾಳೆ . ನಿನ್ನೆ ಮೊನ್ನೆಯವರೆಗೆ ಕವಿತ ಅರ್ಧಕ್ಕೆದಲ್ಲಿಯೇ ಶಾಲೆ ಬಿಟ್ಟು ಹೊರಗಿಳಿದ ವಿದ್ಯಾರ್ಥಿನಿಯಾಗಿದ್ದಳು. ಒಬ್ಬ ಅರ್ಧಕ್ಕೆ ಶಾಲೆ ಬಿಟ್ಟಿರು ವಿದ್ಯಾರ್ಥಿನಿಯಾಗಿದ್ದಳು ಮತ್ತು ತನ್ನ ಒಡಹುಟ್ಟಿದವರ ಆರೈಕೆ ಮಾಡುವುದರಲ್ಲಿ ಆಕೆ ಬಂಧಿಯಾಗಿದ್ದಳು. ತಾಯಿಯು ಆಕೆಯ ಕಿರಿಯ ಸಹೋದರನನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಉಳಿಸಿಕೊಂಡಿದ್ದಳು. ಆಕೆಯ ಪೋಷಕರು ಹತ್ತಿರದ ಹೊಲದಲ್ಲಿ ದುಡಿಯುವ ದಿನಕೂಲಿ ಕಾರ್ಮಿಕರಾಗಿರುವರು. ಆಕೆ ಶಾಲೆಯಲ್ಲಿ ಆಸಕ್ತಿ ಕಳೆದುಕೊಂಡಳು ಮತ್ತು ಮನೆಯಲ್ಲಿ ಉಳಿದುಕೊಳ್ಳುವುದರಲ್ಲಿ ತೃಪ್ತಿಯಾಗಿದ್ದಳು. ತನಗೆ ಶಾಲೆಯು ಕಳೆದು ಹೋಗುತ್ತಿದೆಯೆಂದು ಆಕೆ ಗಮನಿಸುತ್ತಿರಲಿಲ್ಲ. ಅಲ್ಲಿ ತಾನು ಶಾಲೆಯು ನೀಡುವ ಪ್ರಚೋದನೆಯಿಂದ ವಂಚಿತಳಾಗುತ್ತಿದ್ದೇನೆಂಬ ಪ್ರಜ್ಞೆಯಾಗಲೀ ಅಥವಾ ಅದನ್ನು ಪಡೆಯಬೇಕೆಂಬ ಹಂಬಲವಾಗಲೀ ಇರಲಿಲ್ಲ. ಕವಿತಳು ಒಬ್ಬ ಸಾಮಾನ್ಯ ವಿದ್ಯಾರ್ಥಿನಿಯಾಗಿದ್ದಳು. ಕಲಿಕೆಯು ಆಕೆಗೆ ಸುಲಭವಾಗಿ ಬರುತ್ತಿರಲಿಲ್ಲ.

ಅಕ್ಷರದ ಕ್ಷೇತ್ರ ಸಂಯೋಜಕ, ರಘು ಸಮುದಾಯದಲ್ಲಿ ತನ್ನ ನಿಯಮಿತವಾದ ಮನೆ ಭೇಟಿ ಸಂದರ್ಭದಲ್ಲಿ ಕವಿತ ಮನೆಯಲ್ಲಿರುವುದನ್ನು ಕಂಡರು ಮತ್ತು ಆಕೆಯನ್ನು ಪುನಃ ಶಾಲೆಗೆ ಸೇರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆಕೆಯ ಪೋಷಕರಲ್ಲಿ ಆಕೆಗೆ ಶಾಲಾ ವಿದ್ಯಾಭ್ಯಾಸದ ಅವಕಾಶವನ್ನು ನೀಡಲು ಅವರು ಒತ್ತಾಯಿಸಿದರು. ಬಳಿಕ ಅವರು ಶಾಲೆಯ ಶಿಕ್ಷಕರಲ್ಲಿ ಮಾತನಾಡಿ, ಶಾಲೆಯ ಆಡಳಿತ ಮಂಡಳಿಯು ಆಕೆಯನ್ನು ಮರಳಿ ಶಾಲೆಗೆ ತೆಗೆದುಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾದರು. ಆದರೆ ಕವಿತಳಿಂದ ಬಂದ ಪ್ರತಿರೋಧ ಮಾತ್ರ ನಿಜಕ್ಕೂ ಒಂದು ಅಘಾತವಾಗಿತ್ತು. ರಘು ಮತ್ತು ಆಕೆಯ ಶಿಕ್ಷಕರು ಆಕೆಯನ್ನು ತರಗತಿಯಲ್ಲಿ ಉಳಿಸಿಕೊಳ್ಳಲು ಬಹಳಷ್ಟು ಹೆಣಗಾಡಬೇಕಾಯಿತು. ಆಕೆಯ ಮನಸ್ಸು ಅಲ್ಲಿರಲೇ ಇಲ್ಲ. ಕಲಿಕೆಯು ಯಾವತ್ತೂ ಒಂದು ಸವಾಲಾಗಿತ್ತು ಮತ್ತು ಆಕೆ ಅಶಾಂತವಾಗಿದ್ದಳು; ಆಕೆಗೆ ಏಕಾಗ್ರತೆಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ.

ಗಣಿತ ಶಿಕ್ಷಕರಾದ ಮಂಜುನಾಥ್ ಕವಿತಳಿಗೆ ವಿಶೇಷ ಗಮನ ನೀಡಿದರು ಮತ್ತು ಅಕ್ಷರ ಬೋಧನಾ- ಕಲಿಕಾ ಸಾಮಗ್ರಿಗಳು ಬಳಸಿ ಆಕೆಗೆ ಪರಿಕಲ್ಪನೆಗಳನ್ನು ಬೋಧಿಸಲು ಪ್ರಾರಂಭಿಸಿದರು. ಸಂತಸಮಯ ಬಣ್ಣಗಳೊಂದಿಗೆ ಮತ್ತು ತಾನು ಸ್ಪರ್ಶಿಸಿದ ವಸ್ತುಗಳ ಸ್ಪರ್ಶದ ಗುಣಮಟ್ಟವನ್ನು ಅನುಭವಿಸಿ ಆಕೆ ಅತ್ಯಂತ ಖುಷಿ ಪಟ್ಟಳು. ಈ ಕಿಟ್ ನೊಂದಿಗಿನ ಆಕರ್ಷಣೆ ಇನ್ನೂ ಮಾಸಿಲ್ಲ. ಅದೊಂದು ಆಕೆಗೆ ನಿರಂತರ ಆಕರ್ಷಣೆಯಾಗಿದೆ. ಆಕೆ ಬೇಗನೇ ಎಲ್ಲಾ ತರಗತಿ-ಸೂಕ್ತ ಗಣಿತವನ್ನು ಅರ್ಥಮಾಡಿಕೊಂಡಳು. ಆರನೇ ತರಗತಿಗೆ ಭಿನ್ನರಾಶಿ ಮತ್ತು ದಶಮಾಂಶಗಳು ಪಠ್ಯ ಪುಸ್ತಕ ಸೂಚಿಸಿದ ಪರಿಕಲ್ಪನೆಗಳಾಗಿವೆ –ಇವುಗಳು ಸರಕಾರಿ ಶಾಲೆಯ ಕೆಲವು ಮಕ್ಕಳಿಗೆ ಯಾವತ್ತೂ ನಿಭಾಯಿಸಲು ಸಾಧ್ಯವಾಗದ ದೊಡ್ಡ ತಡೆಗಳಾಗಿವೆ. ಆದರೆ ಕವಿತ ತನ್ನ ಗೆಳತಿಯರಿಗೆ ಬೋಧನಾ –ಕಲಿಕಾ ಸಾಮಗ್ರಿಗಳ ಪ್ರದರ್ಶನವನ್ನು ನೀಡುತ್ತಿದ್ದಂತೆ ತನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಳು.
ಅಕ್ಷರದ ಬೋಧನಾ –ಕಲಿಕಾ ಸಾಮಗ್ರಿ -ಅವಕಾಶದ ಒಂದು ಕಿಟಕಿ

ಅಕ್ಷರದ ಬೋಧನಾ –ಕಲಿಕಾ ಸಾಮಗ್ರಿಯು ಅಂತಹ ಕಲಿಕಾ ಸಂಪನ್ಮೂಲಗಳಿಂದ ವಂಚಿತರಾಗಿರುವ ಮಕ್ಕಳಿಗೆ ಒಂದು ಅವಕಾಶದ ಕಿಟಕಿಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯಾದ ವಾಣಿಯವರು ಹೇಳುತ್ತಾರೆ. ವಾಣಿಯು ಬೋಧನಾ ಕಲಿಕಾ ಸಾಮಗ್ರಿಯನ್ನು ಪ್ರತಿ ದಿನವೂ ಬಳಸುತ್ತಾರೆ.

ಐದು ವರ್ಷ ಪ್ರಾಯದ, ಜಾಣತನದ ದೊಡ್ಡ ಕಣ್ಣುಗಳಿರುವ ಒಬ್ಬ ಆಸಕ್ತ ಮಗುವಾಗಿರುವ ನವೀನನ್ನು ಈ ಎಲ್ಲಾ ಸಾಮಗ್ರಿಗಳ ಕುರಿತು ಆತನಿಗೇನು ಅನಿಸುತ್ತಿದೆಯೆಂದು ಕೇಳಿರಿ- ಆತ ಹೇಳುತ್ತಾನೆ “ಸಂತಸ”. ಆತ 3 ವರ್ಷಗಳಿಂದ ಅಂಗನವಾಡಿಯಲ್ಲಿದ್ದಾನೆ ಮತ್ತು ಕೆಲವು ಶಿಶುಗೀತೆ ಆತನಿಗೆ ತಿಳಿದಿದೆ ಮತ್ತು ಬರವಣಿಗೆಯ ಮೊದಲ ಹೆಜ್ಜೆಗಳನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಈಗ A ಯಿಂದ Z ವರೆಗಿನ ಅಕ್ಷರಮಾಲೆಯ ಚಿತ್ರಣವು ಅಷ್ಟು ಪರಿಪೂರ್ಣವಾಗಿಲ್ಲ ಆದರೆ 1 ರಿಂದ 20 ರ ವರೆಗಿನ ಸಂಖ್ಯೆಗಳ ಮೇಲಿನ ಆತನ ಹತೋಟಿ ಉತ್ಕೃಷ್ಟವಾಗಿದೆ. ಕಲಿಕಾ ಘನಗಳ ಮೇಲಿನ ಸಂಖ್ಯೆಗಳನ್ನು ಗುರುತಿಸಲು ಆತನಿಗೆ ಸಾಧ್ಯವಾಗುತ್ತದೆ. ಆತನ ಗ್ರಹಿಕೆಯು ಸುಲಭ, ಸುಲಲಿತವಾಗಿದ್ದು ಮತ್ತು ತತ್ ಕ್ಷಣಕ್ಕೆ ಹೊಮ್ಮುತ್ತದೆ. ಉದಾಹರಣೆಗೆ ಆತ ಘನಾಕೃತಿಯ ಮೇಲಿನ ಚಿತ್ರಗಳತ್ತ ನೋಡುತ್ತಾನೆ ಮತ್ತು “ಎಲ್. ಫಾರ್ ಲಯನ್” , “ಸಿ ಫಾರ್ ಕ್ಯಾಟ್” ಅಥವಾ “ಯು ಫಾರ್ ಅಂಬ್ರೆಲ್ಲಾ” ಎಂದು ಹೇಳುತ್ತಾನೆ.

ನವೀನನಂತೆ ನಾಲ್ಕು ವರ್ಷ ಪ್ರಾಯದ ತಬ್ರೆಜ್ ಗೆ ಶಿಶುಗೀತೆಗಳು ಗೊತ್ತಿದೆ. ಆತನಿಗೆ ರಾಷ್ಟ್ರಗೀತೆ ಹಾಡಲು ಕೂಡಾ ಬರುತ್ತದೆ ಮತ್ತು ಕನ್ನಡ ಅಕ್ಷರ ಮಾಲೆಯನ್ನು ಹೇಳುವನು. ತಬ್ರೆಜ್ ಶಿಶುಗೀತೆಯನ್ನು ಹಾಡುವನು “ ಚಬ್ಬಿ ಚೀಕ್ಸ್, ಡಿಂಪ್ಲ್ಡ್ ಚಿನ್...................” ಮತ್ತು “ಜಾನಿ ಜಾನಿ ಯೆಸ್ ಪಪ್ಪಾ...” ಆತನ ಉಚ್ಚಾರಣೆ ಅಷ್ಟೇನು ತೃಪ್ತಿಕರವಾಗಿಲ್ಲ ಆದರೆ ಆತನ ಹಾವಭಾವಗಳು ಆತ ವಿಷಯವನ್ನು ಅರ್ಥಮಾಡಿಕೊಂಡಿರುವುದನ್ನು ತೋರಿಸುತ್ತದೆ ಮತ್ತು ಆತನ ಆತ್ಮ ವಿಶ್ವಾಸವು ಬೆಳೆದು ನಿಂತ ಹುಡುಗನ ಲಕ್ಷಣಗಳನ್ನು ಸೂಚಿಸುತ್ತವೆ. ಕಲಿಕಾ ಘನಾಕೃತಿಯ ಮೇಲಿನ ಒಂದು ಗಡಿಯಾರದ ಚಿತ್ರವನ್ನು ಆತ ನೋಡುತ್ತಾನೆ ಮತ್ತು ಅದನ್ನು ಆತ ಜೀವಂತಿಕೆಯಿಂದ ಗುರುತಿಸುತ್ತಾನೆ. ಆತ ಇಂಗ್ಲೀಷ್ ಅಕ್ಷರ ಮಾಲೆಗಳನ್ನು ಗುರುತಿಸುವಾಗ ಆತನ ಮುಖದಲ್ಲಿ ಸಂಪೂರ್ಣ ಖಚಿತತೆಯಿರುತ್ತದೆ.